ಚಿತ್ರ / ಧ್ವನಿಸುರುಳಿ: ನಮ್ಮ ಕನ್ನಡ ರಾಜ್ಯೋತ್ಸವ
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ, ಮಹೇಶ್ ಮಹದೇವ್
ಸಾಹಿತ್ಯ: ಮಹೇಶ್ ಮಹದೇವ್ 
ಬಿಡುಗಡೆ ವರ್ಷ: ೨೦೧೯  ಪಿ.ಎಂ.ಆಡಿಯೋಸ್
ರಾಗ: ಬೃಂದಾವನ ಸಾರಂಗ
ಶೃತಿ: ಡಿ 
ತಾಳ: ಆದಿತಾಳ
ಲಯ: ೯೦

ಆಲಾಪನೆ:
ಕನ್ನಡ.........ಕನ್ನಡ...... ಕಸ್ತೂರಿ........ ಕನ್ನಡ....

ಪಲ್ಲವಿ
ಕರ್ನಾಟಕವೆ ನಮ್ಮ ಸ್ವತ್ತು ಕನ್ನಡ ಭಾಷೆಯೆ ನಮಗೆ ಮುತ್ತು 
ಕರ್ನಾಟಕವೆ ನಮ್ಮ ಸ್ವತ್ತು ಕನ್ನಡ ಭಾಷೆಯೆ ನಮಗೆ ಮುತ್ತು 
ಗಂಗ ಕದಂಬ ರಾಷ್ಟ್ರ ಕೂಟರು ಹೊಯ್ಸಳರಾಳಿದ ಈನಾಡು  
ರನ್ನಾ ಪಂಪಾ ರಾಘವಾಂಕ ಕುಮಾರವ್ಯಾಸ ಕವಿಗಳ ಬೀಡು  
ತನುವು ಕನ್ನಡ ಮನವು ಕನ್ನಡ ಉಸಿರು ಉಸಿರಲು ಕನ್ನಡ
ಕರ್ನಾಟಕವೆ ನಮ್ಮ ಸ್ವತ್ತು ಕನ್ನಡ ಭಾಷೆಯೆ ನಮಗೆ ಮುತ್ತು 
ಕರ್ನಾಟಕವೆ ನಮ್ಮ ಸ್ವತ್ತು ಕನ್ನಡ ಭಾಷೆಯೆ ನಮಗೆ ಮುತ್ತು 

ಚರಣ - ೧

ವಿಶ್ವಭೂಪಟಧಿ ತಂತ್ರ ಜ್ಞಾನಕೆ ಕರುನಾಡಿಗಿದೆ ಮಹಾಸ್ಥಾನ 
ತುಂಗಾಭದ್ರಾ ಶರಾವತಿ ಕಾವೇರಿನದಿಯ  ಉಗಮಸ್ತಾನ
ಕಲೆ ಸಂಗೀತ ಸಾಹಿತ್ಯದಿ ಜ್ಞಾನಾರ್ಜನೆಗಿದು ಮಹಾತಾಣ
ಈ ಪುಣ್ಯಭೂಮಿಗೆ ಶಿರವನಮಿಸುತಾ ಉಳಿಸಿಬೆಳಸು ನೀ ಕನ್ನಡ
ಕರ್ನಾಟಕವೆ ನಮ್ಮ ಸ್ವತ್ತು ಕನ್ನಡ ಭಾಷೆಯೆ ನಮಗೆ ಮುತ್ತು 
ಕರ್ನಾಟಕವೆ ನಮ್ಮ ಸ್ವತ್ತು ಕನ್ನಡ ಭಾಷೆಯೆ ನಮಗೆ ಮುತ್ತು 

ಚರಣ - ೨

ವಿವಿಧ ಧರ್ಮಕೆ ವಿವಿಧ ಮತಗಳಿಗೆ ಕರುನಾಡಾಗಿದೆ ನೆಲೆಸ್ಥಾನ
ಈ ನೆಲೆದ ಜಲದ ಸಂರಕ್ಷಣೆಗಾಗಿ ಒಂದಾಗಿ ಸೆರಿ ದುಡಿಯೋಣ
ಶಾಂತಿ ಪ್ರೀತಿ ಸೌಹಾರ್ದತೆಯಿಂದ ಎಲ್ಲರು ಕೂಡಿ ಬಾಳೋಣ
ಶ್ರೀಕನ್ನಡಾಂಬೆಯ ಪಾದಕೆ ನಮಿಸುತ ಕಲಿತು ಕಲಿಸು ನೀ ಕನ್ನಡ
ಕರ್ನಾಟಕವೆ ನಮ್ಮ ಸ್ವತ್ತು ಕನ್ನಡ ಭಾಷೆಯೆ ನಮಗೆ ಮುತ್ತು 
ಕರ್ನಾಟಕವೆ ನಮ್ಮ ಸ್ವತ್ತು ಕನ್ನಡ ಭಾಷೆಯೆ ನಮಗೆ ಮುತ್ತು ......

ವರ್ಗ:ನಾಡಗೀತೆಗಳು
ವರ್ಗ:ಪ್ರಿಯದರ್ಶಿನಿ ಗಾಯನ
ವರ್ಗ:ಮಹೇಶ್ ಮಹದೇವ್ ಸಂಗೀತ
ವರ್ಗ:ಮಹೇಶ್ ಮಹದೇವ್ ಸಾಹಿತ್ಯ
ವರ್ಗ:ಮಹೇಶ್ ಮಹದೇವ್ ಗಾಯನ